ರಾಮೋಜಿ ರಾವ್‌ಗೆ ನಿಧನಕ್ಕೆ ಸಂತಾಪ; ರಜನಿಕಾಂತ್, ಚಿರಂಜೀವಿ, ಪವನ್ ಕಲ್ಯಾಣ್ ಭಾವುಕ; ಹೇಳಿದ್ದೇನು?

author-image
admin
Updated On
ರಾಮೋಜಿ ರಾವ್‌ಗೆ ನಿಧನಕ್ಕೆ ಸಂತಾಪ; ರಜನಿಕಾಂತ್, ಚಿರಂಜೀವಿ, ಪವನ್ ಕಲ್ಯಾಣ್ ಭಾವುಕ; ಹೇಳಿದ್ದೇನು?
Advertisment
  • ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ರಾಮೋಜಿ ರಾವ್‌ಗೆ ಅಂತಿಮ ನಮನ
  • ನಾನು ಅವರಲ್ಲಿ ಒಂದು ಚಿಕ್ಕ ಮಗುವನ್ನು ನೋಡಿದ್ದೇನೆ ಎಂದ ಚಿರಂಜೀವಿ
  • ತೆಲುಗು ಚಿತ್ರರಂಗದಿಂದ ರಾಮೋಜಿ ರಾವ್‌ಗೆ ಗೌರವಪೂರ್ಣ ಶ್ರದ್ಧಾಂಜಲಿ

ಹೈದರಾಬಾದ್: ರಾಮೋಜಿ ಫಿಲ್ಮ್‌ ಸಿಟಿ ಸೃಷ್ಟಿಕರ್ತ, ಈನಾಡು ಸಮೂಹ ಸಂಸ್ಥೆಯ ಸಂಸ್ಥಾಪಕ ರಾಮೋಜಿ ರಾವ್ ನಿಧನರಾಗಿದ್ದಾರೆ. ಧೀಮಂತ ಉದ್ಯಮಿಯ ಅಗಲಿಕೆಗೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ರಾಮೋಜಿ ರಾವ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲಾಗುತ್ತಿದೆ.

publive-image

ರಾಮೋಜಿ ರಾವ್ ಅವರ ಅಂತಿಮ ದರ್ಶನಕ್ಕೆ ಗಣ್ಯರು, ಅಪಾರ ಜನಸಾಗರವೇ ಹರಿದು ಬರುತ್ತಿದೆ. ಮಾಜಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನರೇಂದ್ರ ಮೋದಿ ಅವರ ಪರವಾಗಿ ಆಗಮಿಸಿ ಅಗಲಿಕೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಇದನ್ನೂ ಓದಿ:ಉಪ್ಪಿನಕಾಯಿ ಮಾರಾಟದಿಂದ ಸಾಮ್ರಾಜ್ಯ ಕಟ್ಟಿದ ಧೀಮಂತ.. ರಾಮೋಜಿ ರಾವ್ ಬದುಕಿನ ರೋಚಕ ಕಥೆ ಇಲ್ಲಿದೆ 

ಮೆಗಾ ಸ್ಟಾರ್ ಚಿರಂಜೀವಿ ಅವರು ರಾಮೋಜಿ ಫಿಲ್ಮ್‌ ಸಿಟಿಗೆ ಭೇಟಿ ನೀಡಿ ರಾಮೋಜಿ ರಾವ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ಮಾತನಾಡಿದ ಚಿರಂಜೀವಿ ಅವರು ಎಲ್ಲರೂ ಅವರಲ್ಲಿ ಗಂಭೀರವಾದ ವ್ಯಕ್ತಿತ್ವವನ್ನು ನೋಡಿದ್ದಾರೆ. ಆದರೆ ನಾನು ಅವರಲ್ಲಿ ಒಂದು ಚಿಕ್ಕ ಮಗುವನ್ನು ನೋಡಿದ್ದೇನೆ ಎಂದು ರಾಮೋಜಿ ರಾವ್ ಅವರನ್ನು ಸ್ಮರಿಸಿಕೊಂಡಿದ್ದಾರೆ.


">June 8, 2024

ಇದೇ ವೇಳೆ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ರಾಮೋಜಿ ರಾವ್ ಅವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.


">June 8, 2024

ಸೂಪರ್ ಸ್ಟಾರ್ ರಜನಿಕಾಂತ್ ಅವರು ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡುವ ಮೂಲಕ ತಮ್ಮ ಸಂತಾಪ ಸೂಚಿಸಿದ್ದಾರೆ. ಪತ್ರಿಕೋದ್ಯಮ, ಸಿನಿಮಾ, ರಾಜಕೀಯದಲ್ಲಿ ರಾಮೋಜಿ ರಾವ್ ಅವರು ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ರಾಮೋಜಿ ರಾವ್ ಅವರು ನನ್ನ ಜೀವನಕ್ಕೆ ಮಾರ್ಗದರ್ಶಕರು, ಸ್ಫೂರ್ತಿಯೂ ಆಗಿದ್ದರು ಎಂದು ರಜಿನಿಕಾಂತ್ ಟ್ವೀಟ್ ಮಾಡಿದ್ದಾರೆ.


">June 8, 2024

ರಾಮೋಜಿ ರಾವ್ ಅವರ ನಿಧನಕ್ಕೆ ಇಡೀ ತೆಲುಗು ಚಿತ್ರರಂಗವೇ ಆಘಾತಗೊಂಡಿದೆ. ತೆಲುಗು ಸಿನಿಮಾದ ನಟರು ರಾಮೋಜಿ ರಾವ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ರಾಮೋಜಿ ರಾವ್ ಅವರ ನಿಧನದ ಹಿನ್ನೆಲೆಯಲ್ಲಿ ನಾಳೆ ಇಡೀ ದಿನ ಚಿತ್ರೀಕರಣವನ್ನು ಬಂದ್ ಮಾಡಲಾಗುತ್ತಿದೆ. ತೆಲುಗು ಚಿತ್ರರಂಗದಿಂದ ರಾಮೋಜಿ ರಾವ್ ಅವರಿಗೆ ಗೌರವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment